ದ್ವೀಪದಲ್ಲೊಂದು ಮರ
ಮರದ ಮೇಲೊಂದು ಹಕ್ಕಿ
ಹಕ್ಕಿಯ ಬಾಯಲ್ಲಿ ಗೆದ್ದಲು
ಗೂಡಿನಲ್ಲುಳಿದ ಗೆದ್ದಳುಗಳಿಗೆ ತಾವು ಉಳಿದೆವೆಂಬ ಖುಷಿ
ಹಕ್ಕಿಗೆ ತನಗೆ ಆಹಾರ ಸಿಕ್ಕಿತೆಂಬ ಖುಷಿ
ಮರಕ್ಕೆ ಹಕ್ಕಿ, ಗೆದ್ದಲು ಸೇರಿ ತನ್ನ ತಿಂದಾವೆಂಬ ಭಯ
ಇದ್ದಕ್ಕಿದ್ದಂತೆ ಪಟಪಟನೆ ಗೆದ್ದಲು ಗೂಡಿನ ಮೇಲೆ ಬಿದ್ದ ಮಳೆಹನಿ
ಗೆದ್ದಲುಗಳಿಗೆ ತಮ್ಮ ಗೂಡು ಹಾಳಾದೀತೆಂಬ ಭಯ
ಹಕ್ಕಿಗೆ ತನ್ನ ಮಕ್ಕಳು ಒದ್ದೆ ಆದಾವೆಂಬ ಭಯ
ಮರಕ್ಕೆ ತಾನು ಸ್ವತಂತ್ರನಾಗುವೆನೆಂಬ ಖುಷಿ
ಮೊದಲ ಮಳೆಯ ಖುಷಿ
ಮೊದಲ ಮಳೆಯ ಖುಷಿ
No comments:
Post a Comment