ಯಾರಿಗ್ ಹೇಳಣ ನಮ್ಮ ಪ್ರಾಬ್ಲಮ್ಮು
ಹುಡುಗರ ನೋವಿಗೆ ಇಲ್ಲ ಮುಲಾಮು
ಒಂದ್ ಸೈಡು ಲವ್ವಿಗೆಲ್ಲ ದೊಡ್ಡ ಸಲಾಮು
ಕಿವಿಯಲ್ಲಿ ಇಟ್ಟುಕೊಂಡ ಹೂವೆ ಖಾಯಮ್ಮು
ಎಲ್ಲೇ ಇದ್ರೂನು ನೀವ್ ಹೇಗೆ ಇದ್ರೂನು
ನಿಮ್ಮ ಮದ್ವೆಗೆ ಕರಿಲೇ ಬೇಡಿ ನಮ್ಮನ್ನು
ಮದ್ವೆ ಮಕ್ಳು ಮಾಡಿಕೊಂಡು ಇರ್ರಿ ಆರಾಮು
ತುಂಬಾ ಸಣ್ಣ ಹುಡ್ಗ ಅಂತ ಅನ್ಕೊಂಡಿದ್ದೆ ನಾನು 5ನೆ class ಅಲ್ಲಿ
ನನ್ನಷ್ಟೇ ಎತ್ರ ಇದ್ಲು, ಅದ್ಕೆ ಏನೋ ಅನ್ಸ್ತ ಇತ್ತು ಹೊಡೆಯೋಣ ಗೋಲಿ
Friends ಬಾಯಿಗ್ ಮಣ್ಣು ಹಾಕ, ಮುಚ್ಕೊಂಡು ಇರೋದು ತಾನೆ
ಕೂಗೋಕೆ start ಮಾಡಾಯ್ತು ನಮ್ಮಿಬ್ರನ್ ನೋಡಿದ್ರೇನೆ
7ನೆ class ತನಕ ಒಂದೇ ಒಂದ್ ನಿಮಿಷ ಮಾತಾಡಕ್ ಆಗಿಲ್ಲ
notes ಆದ್ರು ಕೇಳಣ ಅಂದ್ರೆ handwriting -ಎ ಅರ್ಥ ಆಗಲ್ಲ
ಯಾರಿಗ್ ಹೇಳಣ ನಮ್ಮ STARTING ಪ್ರಾಬ್ಲಮ್ಮು
ಮಾತಾಡ್ಸೋದ್ ಬಿಟ್ಟು ಬರಿ ಕಣ್ಣಲ್ಲೇ ಲೈನು
High School ಅಲ್ ಕೂತ್ಕೊಂಡ್ ಸುಮ್ನೆ, ಹುಡ್ಗೀರ್ ನ ನೋಡಿ ಖುಷಿ ಪಡ್ತಾ ಇದ್ವಿ
ಬೋಗಿ ಲೆಕ್ಕ ಇಟ್ಟುಕೊಂಡು, ಇವ್ಳು ನಂಗೆ ಅಂತ ಎಲ್ರೂ ಜಗಳ ಮಾಡ್ತಿದ್ವಿ
Friends ಗಾಗಿ ಜೀವ ಅಂತ, ಪ್ರಪೋಸಿಗೆ help ಮಾಡಾಯ್ತು
ಸಿಕ್ ಹಾಕ್ಕೊಂಡ್ ಪೆಟ್ ತಿನ್ತಿದ್ರೆ ನಾವು ಏನು ಮಾಡಬೇಕಿತ್ತು
ರಾಖಿ ಹಬ್ಬದ ದಿವ್ಸ ನಮ್ಮ ಕೈ ತುಂಬಿ ಹೋಗ್ತಿತ್ತು
ಯಾರ್ ರಾಖಿ ಕಟ್ಟಿಲ್ವೋ ಅವಳನ್ನೇ ಕಣ್ಣು ಹುಡುಕುತ್ತ ಇತ್ತು
ಯಾರಿಗ್ ಹೇಳಣ ಎಲ್ಲಾರ್ದು ಸೇಮ್ ಪ್ರಾಬ್ಲಮ್ಮು
ರಾಖಿ ಕಟ್ ದೇ ಉಳ್ದೋರೆಲ್ಲ ದೊಡ್ ದೊಡ್ಡ ಡ್ರಮ್ಮು
Diploma ಓದೋವಾಗ ಜಾತ್ರೆ ಇತ್ತು ಅಂತ ಒಮ್ಮೆ ಪೇಟೆಗೆ ಹೋದೆ
ತೇರು ನೋಡ್ತಾ ನಿಂತೋಳಿಗೆ ಗುಂಗ್ರು ಗುಂಗ್ರು ತಲೆ ಕೂದ್ಲಿತ್ತು ನೋಡ್ತಾನೆ ಇದ್ದೆ
follow ಮಾಡಿ ತಿಳ್ಕೊಂಡ್ ಆಯ್ತು, ಅವಳ ಮನೆ address ಎಲ್ಲಿ
ಹೊಳೆ ಹತ್ರ ಹೋಗ್ತಾ ಇದ್ದೆ, ಮುಂಗಾರು ಮಳೆ feel ಅಲ್ಲಿ
ನಾನು i love you ಅಂತ ಒಂದಿವ್ಸ ಹೇಳೋಕೆ ಹೋದೆ
ಆವಾಗ್ಲೆ ಗೊತ್ತಾಯ್ತು ಅವಳ 5 - 6 boy friends ನ ಕಥೆ
ಯಾರಿಗ್ ಹೇಳಣ ನಮ್ಮ next ಪ್ರಾಬ್ಲಮ್ಮು
ನಮ್ಮ ಫ್ಲಾಶ್ ಬ್ಯಾಕೇ ಒಂದು chewing -ಉ ಗಮ್ಮು
No comments:
Post a Comment